Friday, January 11, 2013

 

ಹೊಸ ವರ್ಷದ ಹಾರ್ಧಿಕ ಶುಭಾಷಯಗಳು?

ಯಾವುದು ಹೊಸ ವರ್ಷ? ಯಾರಿಗೆ ಹೊಸ ವರ್ಷ? ಏನಿದು ಹೊಸ ವರ್ಷ? 
 ಅವೆ ಕ್ಷಣಗಳು.. 
 ಅವೆ ದಿನಗಳು.. 
 ಅವೆ ವಾರಗಳು.. 
 ಅವೆ ತಿಂಗಳುಗಳು.. 
 ಅವೆ ದಿನಾ ’ಅಂಕಿ’ ಅಂಶಗಳು.. 
 ಅವೆ ಕೊಳೆತೆ ಮನಸ್ಸುಗಳು 
 ಅವೆ ಹುಳುಕು ದೇಹಗಳು 
 ಭ್ರಷ್ಟಾಚಾರದ ಅಭದ್ರ ರಾಜ್ಯಗಳು 
 ಶಿಷ್ಟಾಚಾರ ಮರೆತ ಮಲಿನ ಭ್ರಾಂತಿಯ ಜಾತಿ ಮತಗಳು 
 ಇನ್ನೇನಿದೆ ಇಲ್ಲಿ ಹೊಸತನದ ಗಮಲು? ಮತ್ತೇಕೆ ಈ ಹೊಸವರ್ಷಾಚಾರಣೆ ಮತ್ತದೆ ಕೊಳಕು ಮನಗಳಲಿ? 
 ಏನೇನು ಬದಲಾಗದ ನಾವು ಹೊಸತನವನ್ನು ಆಚರಿಸಲು ಎಷ್ಟು ಯೋಗ್ಯರು? 
 ಹಾದಿ ಬೀದಿಯಲ್ಲಿ ಕಿರುಚಾಡಿ ಊರಿಗೂರೆ ಗುಡುಗುವಂತೆ ಸದ್ದು ಗದ್ದಲ ಮಾಡಿಕೊಂಡು ನಟ್ಟನಡು ರಾತ್ರಿಯಲ್ಲಿ 
ಕುಡಿದ ಅಮಲಿನಲ್ಲ್ಲಿ 
 ತೂರಾಡಿಕೊಂಡು ಪುಂಡ ಪೋಕರಿಗಳು ಗೊಳ್ಳೋ.. ಎಂದು, ಸಿಕ್ಕ ಸಿಕ್ಕವರಿಗೆ(ಹ್ಯಾಪಿ ನಿವ್ ಯಿಯರ್ ಗುರು)   
ತೊಂದರೆ ಮಾಡಿಕೊಂಡು  
 ಎಲ್ಲೆಲ್ಲಿಂದಲೋ ಹೆಕ್ಕಿ ತಂದ ಹಣದಿಂದ ಡಬ್ ಡುಬ್ ಅಂತ ಪಟಾಕಿ ಸಿಡಿಸಿ ಜೊತೆಗೊಂದಿಷ್ಟು ವಾಯು ಮಾಲಿನ್ಯ 
ಮಾಡಿಕೊಂಡು 
 ನಿದ್ದೆಗೆಟ್ಟು ಹೊಸವರ್ಷಾಚರಣೆ ಅಂತ ಒಂದಿಷ್ಟು ಕಾಲಾಹರಣ ಮಾಡೋದು, ಇದೆ ಅಲ್ವ ನಮ್ಮೂರಲ್ಲಿ ನಡೆಯೋ ಹೊಸ 
ವರ್ಷಾದ ಸಂಭ್ರಮ? 
 ಅಲ್ಲಲ್ಲಿ ಸುಮ್ ಸುಮ್ನ್ ಜಗಳ ತಗೆದು ಹೊಡೆದಾಡಿ ರಂಪ ಮಾಡೋದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರೋದು 
 ಮನೆಗಳಲ್ಲಿ ರಾತ್ರಿಯಲ್ಲ ನಿದ್ದೆ ಗೆಟ್ಟು ಕೇಕ್ ಕಟ್ ಮಾಡಿ ಕೇಕೆ ಹಾಕಿ ಮಲಗಿರೋರ್ ನಿದ್ದೆಗೆಡಸಿ ಸುಳ್ ಸುಳ್ ನಗುವಿಗೆ 
ಪಾತ್ರರಾಗೋದು 
 ಇದೆ ತಾನೆ ನಾವು ಮಾಡೋ ಗಣಂದಾರಿ ಹೊಸವರ್ಷಾಚರಣೆ...? 
 ಹಾಂ... ಇನ್ನೂ ಹೊಸವರ್ಷದಿಂದ ನಾನು ಕುಡಿಯೊ ಚಟ ಬಿಟ್ಬಿಡಿತೀನಿ ಮಗ, ನಾನು ಶ್ರಮ ವಹಿಸಿ ಕೆಲಸ ಮಾಡಿ 
ಒಳ್ಳೆ ಹೆಸರನ್ನ ಗಳಿಸ್ತೀನಿ 
 ಹಾಂ... ಇನ್ನೆಂದೂ ಕಳ್ಳತನ ಮಾಡಲ್ಲಪ್ಪ, ಸುಳ್ಳೇಳಿ ಮನೆಯವರ ಹತ್ತಿರಿ ಕಾಸ್ ಕಿತ್ತು ಸಿನಿಮಾ ನೋಡೊಲ್ಲ 
ಚೆನ್ನಾಗೆ ಓದಿ ಒಳ್ಳೆ ಅಂಕ ತೇಗಿತೀನಿ ಕಣೆ ನಾನು 
 ಹಾಂ..ಇನ್ನೂ ನಮ್ ಮನೆಯವರಿಗೆ ಅದು ಬೇಕು ಇದು ಬೇಕು ಅಂತ ಪ್ರಾಣ ತಿನ್ನೊಲ್ಲಪ್ಪ ಅಂತೆಲ್ಲ ರೆಸಲೂಸನ್ 
ಮಾಡ್ಕೊಳುದು, ನಿಜವಾಗ್ಲು ಇದನ್ನೆಲ್ಲ ಯಾರು ಎಷ್ಟು ದಿನ ಪಾಲಿಸುತ್ತಾರೆ 
 ಹುಟ್ಟಿದ ಗುಣ ಸುಟ್ಟರು ಹೋಗಲ್ಲ ಅಂದಾಗೆ ಮೂರ್ ದಿನಾಕ್ಕೊ ನಾಲ್ಕು ದಿನಕ್ಕೊ ಮರೆತು ಮಾಮುಲಿ ಆಗ್ಬಿಡ್ತೀವಿ ಅಲ್ವ?
 ನಿಜಾ ತಾನೆ!? 
 ಆದರೆ, ಮರ ಗಿಡಗಳು ಪ್ರತಿ ವಸಂತಕ್ಕೂ ತಮ್ಮೆಲ್ಲ ಎಲೆಗಳನ್ನು ಉದುರುಸಿಕೊಂಡು ಹೊಸದಾಗಿ ಹಸಿರ ಉಡುಗೆ 
ಹುಟ್ಟು ಮೈ ತುಂದುಕೊಂಡು ನಲಿದಾಡುತ್ತವೆ 
 ಹಾಗೂ ಎಲ್ಲೆಲ್ಲಿಂದಲೋ ಓಡೋಡಿ ಬರುವ ಹಕ್ಕಿ ಪಕ್ಷಿಗಳಿಗೆ ಮನೆಯಾಗುತ್ತವೆ, ಆ ಹಕ್ಕಿಗಳಲ್ಲೊ ಎಲ್ಲಿಲ್ಲದ ಲವಲವಿಕೆ
 ಕೂಗಾಟ, ಕಿರುಚಾಟ ಇಂಪಾದ ಮುದದಾಟ 
 ಎಷ್ಟು ಚಂದ ಅನಿಬಿಡುತ್ತದೆ ಅಲ್ವ? ಅದು ಹೊಸತನ ಅಂದ್ರೆ! 
 ಹಾವು ತನ್ನ ಮುದಿ ಮೈನ ಮೇಲಿನ ಚರ್ಮವನ್ನೂ ಕಿತ್ತೊಗೆದು ಅಂದೊಮ್ಮೆ ಮಿರಿಮಿರಿ ಮಿಂಚುತ್ತಾ ಅಲ್ಲಲ್ಲಿ 
ಹೆದರುತ್ತಾ... ಎಡೆ ಎತ್ತಿ ನಿಂತರೆ ಎಷ್ಟು ಭಯದಾನಂದ ಅಲ್ವ?
ಅದು ಹೊಸತನ ಅಂದ್ರೆ! 
 ಆದರೆ... ನಮ್ಮಲ್ಲೇನಿದೆ ಹೊಸತನ ಈ ಹೊಸ ಹೊಸದಾಗಿ ಪ್ರತಿ ವರ್ಷ ಬಂದೋಗುವ ಅವೆ ಹಳೆ ದಿನಗಳಲ್ಲಿ? 
 ಒಂದಂತು ನಿಜ ನಾವು ನಿರೀಕ್ಷಿಸದೆ ಬರುವ ಪ್ರತಿ ಕ್ಷಣವು ಹೊಸದೇ, ಆ ಕ್ಷಣ, ದಿನಗಳನ್ನ ಹೇಗೆ 
ಉಪಯೋಗಿಸಿಕೊಳ್ಳುತ್ತೇವೆ ಅನ್ನೋದು ಮುಖ್ಯ? 
 ನಾವು ನಮಗೆಷ್ಟು ಮಾಡಿಕೊಂಡೆವು ಅನ್ನೊದಕಿಂತ ಬೇರೆಯವರಿಗೆಷ್ಟು ಉಪಕಾರಿಯಾದೆವು ಎನ್ನುವುದು 
ತುಂಬ ಖುಷಿಕೊಡುತ್ತದೆ 
 ಪ್ರತಿಸಲ ಬೇರೆಯವರನ್ನ ದೂಷಿಸಿಕೊಂಡೆ ಕಾಲ ಕಳೆದುಬಿಡುತ್ತೇವೆ ಅದು ತಪ್ಪು ನಮ್ಮದೆ ಆಗಿದ್ದರು. 
 ಈ ದೇಶ ಭ್ರಷ್ಟಾಚಾರದಿಂದ ತುಂಬಿ ಹೊಯ್ತು, ರಾಜಕೀಯದಿಂದ ಎಲ್ಲ ಹಾಳಾಗಿ ಹೋಯ್ತು, ಅವನು ಸರಿಯಿಲ್ಲ 
ಇವನು ಸರಿಯಿಲ್ಲ ಅಂತೆಲ್ಲ ಬೇರೆಯವರನ್ನು  
 ಬಾಯಿಗೆ ಬಂದಾಗೆ ಬೈದುಕೊಂಡುಬಿಡುತ್ತೇವೆ.. ಆದರೆ ಒಮ್ಮೆ ಯೋಚನೆ ಮಾಡಿ ನೋಡಿ ನಾನು ಸರಿಯಿದ್ದೇನಾ? 
ಈ ದೇಶಕ್ಕೆ ಈ ಸಮಾಜಕ್ಕೆ ನಾನೇನೆಷ್ಟು ಉಪಚರಿಸಿದ್ದೇನೆ ಎಂದು 
 ಶೂನ್ಯ!.  ನಮ್ಮ ಜನಗಳಿಗೆ ನನ್ನದು ಎನ್ನುವುದು ತಮ್ಮ ತಮ್ಮ ಮನೆ,ಬಂಧು ಬಾಂಧವರಿಗೆ ಮಿಸಲಾಗಿದೆ ಮತ್ತೇಗೆ 
ನಮ್ಮ ದೇಶ ಎಲ್ಲ ಇದ್ದು ಸಿರಿವಂತ ದೇಶವಾಗೋದು? ಮತ್ತೇಗೆ ನಮ್ಮ ದೇಶದಲ್ಲಿರೊ ಜನಗಳು 
 ಬಡತನದಿಂದ ಹೊರಬರೋದು, ನಮ್ಮ ಮನೆಯಂಗಳದ ಕಸವನ್ನು ರಸ್ತೆಗೆ ಗುಡಿಸಿಬಿಡುತ್ತೇವೆ.. ಅಂದರೆ ಅಂಗಳ ನಮ್ಮದು.  
 ರಸ್ತೆ ಯಾರದು? ಸರಕಾರದ್ದೆ? ಸರಕಾರ ಎಂದರೆ ಯಾರು? 
 ನಿಜಕ್ಕೂ ’ಸೂಪರ್” ಚಿತ್ರ ನೆನೆಪಾಗುತ್ತದೆ ಉಪೇಂದ್ರರವರ ಆ ಅದ್ಭುತ ಕಲ್ಪನೆ ನಿಜವಾಗಬಾರದೇಕೆ ಎನಿಸುತದೆ. 
 ಸುಖಸುಮ್ಮನೆ ಈ ರೀತಿಯ ಆಚಾರಣೆಗಳಿಂದ ಮೂಢರಾಗುತ್ತಿದ್ದೆವೆ ಎನಿಸುತಿದೆ, ಹಣ ಕಾಲ ಎಲ್ಲವನ್ನು 
ವ್ಯಾರ್ತಮಾಡುತ್ತಿದ್ದೇವೆ ಎನಿಸುತಿದೆ, 
 ತುತ್ತಿಗಾಗಿ ಚಡಪಡಿಸೋ ಜೀವಿಗಳು ನಮ್ಮ ಅಕ್ಕ-ಪಕ್ಕದಲ್ಲೇ ಇದ್ದರೂ ಮರೆತೆದ್ದೆವೆ ಎನಿಸುತ್ತಿದೆ, ಪ್ರೀತಿ, 
ವಿಶ್ವಾಸವನ್ನು ತೊರೆದು ಕೋಪ ತಾಪಕ್ಕೆ ಮನಸ್ಸೊಡ್ಡಿದ್ದೇವೆ ಎನಿಸುತಿದೆ, 
 ಪ್ರೀತಿಯಿಂದ, ಒಳ್ಳೆತನವ ಮೈಗೂಡಿಸಿಕೊಳ್ಳುವುದರಿಂದ, ಕಷ್ಟದಲ್ಲಿರುವವರಿಗೆ ಸಹಾಯಕರಾಗುವುದರಿಂದ, 
ಪ್ರತಿ ಕ್ಷಣವನ್ನು ಆಚಾರಿಸೋಣ ಪ್ರತಿ ದಿನವನ್ನು ಸಂಭ್ರಮಿಸೋಣ  
 ಜನವರಿ ಒಂದರ ಆಚಾರಣೆ ಒಂದು ದಿನಕ್ಕೆ ವಿಸಲಿಡದೆ ಪ್ರತಿಕ್ಷಣವು ಹೊಸತನವನ್ನು ಮೈಗೂಡಿಸಿಕೊಳ್ಳೋಣ, 
ಈ ದೇಶದ, ಈ ಜಗತ್ತಿನ  ಒಳಿತಿಗಾಗಿ ಶ್ರಮಿಸೋಣ,
......................................................................ಬಸು 

ನಲ್ಲ ಪ್ರಶ್ನೆ ನಿನ’ಗಲ್ಲ’! 


 ತಂಗಾಳಿಯಾಗಿ ತಗುಲಲೆ 
 ಮುಗಿಲ ಮೌನಿಯಾದ ನಿನ್ನಾ....? 

 ನದಿಯಾಗಿ ಹರಿದರಿದು ಸಾಗಲೆ 
 ಕಡಲ ಧ್ಯಾನದಲ್ಲಿರುವ ನಿನ್ನಾ...? 

 ಬಣ್ಣದ ಬಿಲ್ಲಾಗಿ ನಿನ್ನೊಡಲ ಸೇರಲೆ 
 ಮಳೆಯಲಿ ಬಿಸಿಲಾಗಿರುವ ನಿನ್ನಾ..? 

 ಸುಗಂಧವಾಗಿ ಘಮಘಮಿಸುವಂತಾಗಲೆ 
 ಮುಳ್ಳಲಿ ಹೂವಾಗಿರುವ ನಿನ್ನಾ...? 

 ಅಲೆ ಅಲೆಯಾಗಿ ತಲುಪಿ ಬಿಡಲೆ 
 ಸಾಗರದ ಅಂಗಲಿ ದಡವಾಗಿರುವ ನಿನ್ನಾ..? 

 ಇಂಚರದ ಸಂಗೀತ ಸುಧೆಯಾಗಿ ಕೂಡಲೆ 
 ತಂತಿಯಲಿ ವೀಣೆಯಾಗಿ ಅಡಗಿರುವ ನಿನ್ನಾ..? 

 ನೀನೇ ತಾನೆ ನನಗೆಲ್ಲ ನನ್ನ ನಲ್ಲ 
 ನೀನಿಲ್ಲದೆ ನಾನೆಲ್ಲ ಶೂನ್ಯವಲ್ಲದೆ ಬೇರೇನು ಅಲ್ಲ 

 ............................................ಬಸು 

Thursday, September 8, 2011

ಮನದ ನುಡಿ........."ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ"

      ಆ ಒಂದಿಡಿ ನೆನಪುಗಳು ನನ್ನ ಈ ಪುಟ್ಟ ಹೃದಯ ಪಡಸಾಲೆಯಲ್ಲಿ ಕುಳಿತು ಅದೆಷ್ಟು ಕಾಡುತ್ತಿವೆ ಎಂದರೆ!?  ಕಣ್ಣು ನನ್ನದೆ ಆದರೂ ನೋಟ ಇನ್ಯಾರದೋ...!  ಕಾಲುಗಳು ನನ್ನವೆಯಾದರು ನಡಿಗೆ ಮಾತ್ರ ಮತ್ಯಾರದೋ...! ನನ್ನನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ಆ ನೆನಪುಗಳು ಅದ್ಯಾಕೋ ಈ ಜನ್ಮಕೆ ಮುಗಿಯಲಾರವೇನೊ ಎನಿಸುತ್ತಿದೆ ಕಣ್ರಿ.
       ಒಂದೇ ಒಂದು ಚಿಕ್ಕ ಬದುಕಿನಲ್ಲಿ ಈಗಾಗಲೆ ಅರ್ಧದಷ್ಟು ಮುರಿದು ತಿಂದಾಗಿ ಬಿಟ್ಟಿದೆ, ಉಳಿದೊಂದಿಷ್ಟು ಏನಾಗುವುದೊ ಅದಂತೂ.. ನಾ ಕಟ್ಟಿಕೊಂಡಿರುವ ಕನಸ್ಸುಗಳಿಗೆ ದೂರ, ವಿವರಿಸಲಾಗದ ಮಹಾಭಂಡಾರ, ಗುಡಾಣದ ಗುಹೆಯೊಳಗಿರುವ ನಿಗೂಢ ಸತ್ಯಗಳು, ಆಸೆಗಳನ್ನ ಬತ್ತಿಸಿ ಬಿಡುವಂತಹ ಬರಗಾಲ ಬಂದರೂ ಆಶ್ಚರ್ಯವಿಲ್ಲ ಬಿಡಿ. 
                                    ನಿನ್ನೆ ರಾತ್ರಿ  ಅದೊಂದು ಕೆಟ್ಟ ಆಲೋಚನೆಯೊಂದಿಗೆ ಕೈಗೆತ್ತಿಕೊಂಡು ಮೋಬೈಲ್ ನ್ನು ಸುಮ್ಮನೆ ಇರಲಿಲ್ಲ ನಾನು, ಇರಲಿ ನೋಡೋಣ ಅಂದುಕೊಂಡು ಪಟಪಟ ಅಂತ ಹತ್ತು ನಂಬರ್ ಗಳನ್ನ ವತ್ತಿಬಿಟ್ಟಿದ್ದೆ... ಅವು ನನ್ನ ತಲೆಯಿಂದ ಎಂದೆಂದೂ ಅಳಿಸಿಹೋಗದ ನಂಬರ್, ಈ ಎದೆಯಿಂದ ತಗೆದೆಸೆಯಲಾಗದ ಹಾಗೂ ನೆನಪುಗಳ ಹೆದ್ದಾರಿ ಗುರಿತಿಸಬಲ್ಲ ನಂಬರ್, ಸಾವಿರ ಕರ್ವ್ ಗಳು, ತಿರುವುಗಳು, ಕಲ್ಲು ಮುಳ್ಳುಗಳ ರಾಶಿ ತುಂಬಿದ್ದ ಪಾಳು ಬಿದ್ದ ಹಾಳು ಮನೆಗೆ ಕರೆದೋಗುವ ರಹದಾರಿಯ ಸೂಚಿಸುವ ನಂಬರ್ ಗಳೇ...ಇರಬೇಕು ಅವು!
          ’ ನಾನು ಸತ್ತುಹೋಗುತ್ತೇನೆ ನೋಡು....’  ಎನ್ನುವ ಸಣ್ಣ ನೆಪ ನಮ್ಮಿಬ್ಬರ ತುದಿ ಬಾಯಿಯಲ್ಲಿ  ಬಂದು ಒಬ್ಬರನ್ನೊಬ್ಬರು ಹೆದರಿಸಿಕೊಂಡು ಗೋಳಾಡುವ ಆ ಕ್ಷಣಗಳನ್ನ ಮತ್ತೆಂದಾದರೂ...ನೆನಪಿಸಿಕೊಂಡರೆ ನಗುಬರಬಹುದು...:-), ಇಲ್ಲ ಅಳುಬರಬಹುದು...:-(.
               ವಾಸಿಯಾಗಲು ಬಿಡದ ನೆನಪುಗಳನ್ನ ಮತ್ತೆ ಮತ್ತೆ ಕೆದುಕಿಕೊಂಡು, ಕೆರೆದುಕೊಂಡು ಗಾಯ ಮಾಯದಂತೆ ಹೆಚ್ಚೆಚ್ಚು ಮಾಡಿಕೊಳ್ಳುವ ನಾನು ಮೂರ್ಖನೇ..ಸರಿ,   ಅವಸರಕ್ಕೆ ಬಿದ್ದು ನನ್ನ ಬದುಕನ್ನೆ ಹಾಳುಬಾಡಿಕೊಂಡುಬಿಡುವೆನೆನೋ..!!? ಕುತೂಹಲಕ್ಕೆ ಕರಗಿ ಭಾವನೆಗಳಿಗೆ ರೆಕ್ಕೆ ಪುಕ್ಕ ಬೆಳೆಸಿ ಕಾಲ್ ಮಾಡಿ ಹಾರುತ್ತಿರುವ ಬೆಂಕಿಯನ್ನು ನಂದಿಸಿ   




;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;
ಮುಂದುವರಿಯುವುದು....ನೆನಪಿನ ಕಥೆ.... 













































































































































...................................................................................................................basu 

"ನನ್ ಮನದ ಮಾತು ಮನಸಿಗಾಗಿ"


Sunday, September 4, 2011

ನನ್ನ ಕವಿತೆ.... "ಏನಿತ್ತು ನಿನ್ನ ಮನದೊಳಗೆ?"


ನನ್ನ ಕವಿತೆ.... " ನನ್ನ ನಲ್ಲ"


"ಮನದ ಮಾತು" ಪ್ರೀತಿಗಾಗಿ.

ದಿನಾಂಕ: ೧೪.೦೮.೨೦೦೮ ರಲ್ಲಿ ಹೀಗೆ ಒಂದು ಪತ್ರ ಬರೆದೆ ನನ್ನವಳಿಗಾಗಿ....... 
ನೀವು ಓದಿಬಿಡಿ...
ನಂತರ ಸುಮ್ಮನೆ ನಕ್ಕುಬಿಡಿ...

       ಮನದ  ಏದುಸಿರಿನಲ್ಲಿ ಏರುಪೇರಿಲ್ಲದೆ ಒಂದೇ ಸಮನೇ ಗಿರಕೆ ಹೊಡೆಯುವ ಕೆಲವು ನೆನಪುಗಳು ಅದ್ಯಾಕೊ ಈ ಜನ್ಮಕ್ಕೆ ಮುಗಿಯಲಾರವೇನೋ..?
ಮುಷ್ಠಿ ಗಾತ್ರದ ಹೃದಯದಲ್ಲಿ ಅದೆಷ್ಟು ಕೋಟಿ ಕೋಟಿ ಕನಸ್ಸುಗಳು ಪೈಪೋಟಿಯಲ್ಲಿ ಸಾಲು ಸಾಲಾಗಿ ನಿಂತು ನಾ ಮುಂದು ತಾ ಮುಂದು ಅಂತ ಕಿತ್ತಾಡುತ್ತಿವೆ ಎಂದರೇ....? ಹೇಳಿಬಿಡಲು ನನಗೆ ನಾಚಿಕೆ ಅನಿಸಿಬಿಡಬಹುದು!.
        ಅದೃಷ್ಟ ಎನ್ನುವ ವಿಧಿ ಬರಹದಲ್ಲಿ ಅದೃಶ್ಯರಾಗಿ ಉಳಿದುಬಿಡುವ ಕೆಲವು ಸವಿನೆನಪುಗಳನೊತ್ತ ಕೆಲವು ಮನಸ್ಸುಗಳು ಯಾರದೊ ಒತ್ತಡಕ್ಕೆ ಮಣಿದು ಕಂಡು ಕಾಣದಂತೆ, ಕೇಳಿಯು ಕೇಳದಂತೆ, ಅತ್ತರೂ ನಕ್ಕಂತೆ ನಟಿಸಿ ನಡೆದು ಬಿಡುವ ವಿಪರ್ಯಾಸದ ಸುಳಿಯಲ್ಲಿ ಸಿಲುಕಿ ನಲುಗುವ ಪರಿಯ ನೀ ಅರಿಯಲಾರಯಾ ದೈವವೇ...?
        ಈ ದುಃಖ, ಸಂತೋಷ ಅಥವಾ ಮನದ ತಿಳಿ ಭಾವನೆಗಳನ್ನು ಬಗೆದು ಬಗೆದು ಹಂಚಿಬಿಡುವ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?!! ಕೈಗೆ ಸಿಕ್ಕಿದ್ದಷ್ಟು ಬಾಚಿ ಬಾಚಿ ಹಂಚಿ ಹಗುರಾಗಿ ಬಿಡಬಹುದಿತ್ತೇನೋ..! ಈ ಒಂದು ಸಣ್ಣ ಮನದ ಪುಟ್ಟ ಹೃದಯ ಕೋಣೆಯಲ್ಲಿ ಅದೆಷ್ಟು ಅಂತ ತುಂಬಿಸಿಕೊಳ್ಳೊದು?
              ನಡೆದು ಬಂದ ದಾರಿಯನ್ನು ಮರೆತುಬಿಡಬಹುದು,
              ಇಟ್ಟ ಹೆಜ್ಜೆ ಗುರುತನ್ನ ಅಳಿಸಿಬಿಡಬಹುದು, 
ಆದರೆ....
               ಸುಮಧುರ ಸಿಹಿ ನೆನಪುಗಳನ್ನೂ........???
" ಎತ್ತ ಹೊರಟೆ ಮನಸ್ಸೆ?
ನಿನ್ನ ಕಟ್ಟಿ ಹಾಕಿರುವುದು ದೈವ!
ಸುಟ್ಟುಬಿಡುವೆಯಾ... ನಿನ್ನೆಲ್ಲ ಕನಸ್ಸಾ?
ಇತ್ತ ಸಾಯಲು ಆಗದೆ
ಇತ್ತ ಬದುಕಲು ಆಗದೆ
ಹೆಣಗಾಡಿದೆ ನೆನಪುಗಳನ್ನೊತ್ತ ಈ ಜೀವ!

ಬಾಡಿ ಹೋಗುವ ಹೂವಾಗಿದ್ದರೆ ಚೆಂದ
ಕರಗಿ ಹೋಗುವ ಮೋಡವಾಗಿದ್ದರೆ ಚೆಂದ
ಒಣಗಿ ಹೋಗುವ ತರಗೆಲೆಯಾಗಿದ್ದರೂ.. ಚೆಂದ
ಮಾತು ಬಾರದಿರುವ ಮೂಖ ಪ್ರಾಣಿಯಾಗಿದ್ದರೂ ಚೆಂದ
ಆದರೆ ಗರಿಗೆದರಿ ನೋವುಗಳಿಗೆ ನೀರೇರೆದು ಹುರಿದುಂಬಿಸುವ ’ನೆನಪುಗಳಿಗೆ’
ಜೀವವಿತ್ತು ತಮಷೆ ಮಾಡುವ ಪರಿಯಂತ ಚೆಂದ?????
   
ಹಾಯ್..... 
              ಕ್ಷಮಿಸು ಏನೇನೋ...ಬರೆದು ಬಿಟ್ಟೆ ಅನಿಸುತ್ತೆ!!
 ನಿನ್ನ ಬದುಕಿನೊಳಗೆ ನಾನು ಬರಬಾರದಿತ್ತು ಆದರೆ ನಿನ್ನನ್ನು ಕೇಳದೆ ಬಂದುಬಿಟ್ಟೆ ದಯವಿಟ್ಟಿ ಕ್ಷಮೆ ಇರಲಿ, ನನ್ನ ಮಂಕು ಕವಿದ ಮಂದ ಬುದ್ಧಿಯಿಂದ ನಿನ್ನ ಸ್ನೇಹ ಕೊಂಡಲಿಗಳಿಗೆ ಕೊಡಲಿಯಾದೆ ದಯಮಾಡಿ ಕ್ಷಮಿಸಿಬಿಡು, ನಿನ್ನನ್ನು ಒಂದೇ ಒಂದು ಮಾತು ಕೂಡ ಕೇಳದೆ ನನ್ನೆದೆಯಲ್ಲಿ ನಿನ್ನೆಸರ ಪುಟ್ಟ ಅಲ್ಲ ಅಲ್ಲ ಬಲು ದೊಡ್ಡ... ಬಹಳ ದೊಡ್ಡ ಪ್ರೇಮ ಮಂದಿರವನ್ನು ನಾನೆ ಸ್ವತಃ ನಿರ್ಮಿಸಿಬಿಟ್ಟೆ, ಅದು ತಪ್ಪಲ್ಲ! ಆದರೆ ಅಲ್ಲಿ ನೀನು...ನೀನೊಬ್ಬಳೇ.. ಇರಬೇಕು ಅಂತ ಕನಸ್ಸು ಕಂಡೆ ಕೃಪೆತೋರಿ ಮನ್ನಿಸಿಬಿಡು.
      ಇಷ್ಟೆಲ್ಲ ತಿಳಿದ ಮೇಲೆ ನಿನಗೆ ಅನ್ನಿಸಿರಬಹುದು  ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ ಅಷ್ಟೆ ಅಂತ ಆದರೆ  ಈ ನನ್ನ ಎದೆಯ ಗರ್ಭಗುಡಿಯಲ್ಲಿ ನಿನ್ನದೊಂದೇ.. ಸಾಮ್ರಾಜ್ಯ ಅದನ್ನು ಆಳುವ ನೆನಪಿನ ದೊರೆ ನಾನೊಬ್ಬನೆ ನಾನೊಬ್ಬನೆ ಅಲ್ಲಿಗೆ ಯಾವುದೇ ನರಪಿಳ್ಳೆಗೂ ಪ್ರವೇಶವಿಲ್ಲ ಅಲ್ಲಿ ನೀನು ಮಾತ್ರ ಪ್ರತಿಸ್ಥಾ ಪನೆಗೊಂಡಿರುವವಳು ಮತ್ಯಾರೆ ಬಂದರು ಗುಡಿಯ ಬಾಗಿಲಲ್ಲಿ ನಿಂತು ಹೋಗಬೇಕಷ್ಟೆ.
           ಪಾಪು! ಪ್ರೀತಿ ಎನ್ನುವ ಎರಡುವರೆ ಅಕ್ಷರವನ್ನಾ ನಿನಗೆ ತಿಳಿಯದಲೆ ಅದೆಷ್ಟು ಅಂದವಾಗಿ, ಅದ್ಭುತವಾಗಿ ಕೆತ್ತಿಬಿಟ್ಟೆ? ನಿಜಕ್ಕೂ ಈ ಜನ್ಮದಲ್ಲಿ ಮರೆಯಲಾಗದ, ತೊರೆಯಲಾಗದ ’ಪ್ರೀತಿ’ ಎಂದರೆ..... ಅದು ನೀನು ಮಾತ್ರ.
ಈ ಎರಡುವರೆ ಅಕ್ಷರದಲ್ಲಿ ಸ್ವಲ್ಪ ಕೂಡ ಕದಿಯುವ ಯಾವ ಜೀವಿ ಕೂಡ  ಈ ಭೂಮಿಯಲ್ಲಿ ಹುಟ್ಟಿರಲಾರದು ಎನಿಸುತ್ತದೆ. ನನ್ನ ಅಮಾಯಕ ಎದೆಯಲ್ಲಿ ನೀ ಬರೆದ ಪ್ರೀತಿ ಪುಟಗಳು  ಈ ಜನ್ಮ ಅಲ್ಲ ಇನ್ನಾವ ಜನ್ಮದಲ್ಲೂ ನಾಶವಾಗಲಾರವು. ನನ್ನ ಬದುಕಿನ ಪ್ರೇಮ ಪುಸ್ತಕದಲ್ಲಿ ಮೊದಲನೆ ಸಾಲಿನ ಮೊದಲನೆ ಪದವಾದ ನಿನಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.
                                     ತಿಳಿದೊ, ತಿಳಿಯದೆಯೋ ನನ್ನಿಂದ ಏನಾದರೂ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿಬಿಡು, ನೀನು ಸಿಗಲಿಲ್ಲವಲ್ಲ ಅನ್ನುವ ನೋವು ನನ್ನಲ್ಲಿರಬಹುದು ಆದರೆ ಅದು ನಿನ್ನ ಸಂತೋಷಕ್ಕೆ, ನಿನ್ನ ನೆಮ್ಮದಿಗೆ ಎಂದೆಂದೂ ಕೆಡಕು ಬಯಸುವುವಂತದ್ದಲ್ಲ........
         ಈ ಭೂಮಿಯಲ್ಲಿ ಬಹಳ ಅಪರೂಪ ಎನ್ನುವುದೆಲ್ಲ  ನಿನ್ನದಾಗಲಿ ಎನ್ನುವ ಬಯಕೆ ನನ್ನದು.
        ತುಡಿತ ತುಂಬಿದ ಬಡಿತದಲ್ಲಿ ನೋವುಗಳಿಲ್ಲದ ಬದುಕು ನಿನ್ನದಾಗಲಿ ಎನ್ನುವ ಆಸೆ ನನ್ನದು.
       ಅಂದ ಚಂದದೊಂದಿಗೆ ಬಂದಿಯಾದ ಆನಂದವೆಲ್ಲ ನಿನ್ನೊಬ್ಬಳಿಗೆ ಸಿಗಲಿ ಎನ್ನುವ ಸ್ವಾರ್ಥ ನನ್ನದು.
ನಿನ್ನ ಇಷ್ಟದಂತೆ ನಿನ್ನ ಬದುಕೆಲ್ಲ ಬಂಗಾರವಾಗಲಿ ಎಂದು ಹಾರೈಸುತ್ತಾ....................
                                                                                  ..............ಬಸು"