Thursday, September 8, 2011

ಮನದ ನುಡಿ........."ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ"

      ಆ ಒಂದಿಡಿ ನೆನಪುಗಳು ನನ್ನ ಈ ಪುಟ್ಟ ಹೃದಯ ಪಡಸಾಲೆಯಲ್ಲಿ ಕುಳಿತು ಅದೆಷ್ಟು ಕಾಡುತ್ತಿವೆ ಎಂದರೆ!?  ಕಣ್ಣು ನನ್ನದೆ ಆದರೂ ನೋಟ ಇನ್ಯಾರದೋ...!  ಕಾಲುಗಳು ನನ್ನವೆಯಾದರು ನಡಿಗೆ ಮಾತ್ರ ಮತ್ಯಾರದೋ...! ನನ್ನನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ಆ ನೆನಪುಗಳು ಅದ್ಯಾಕೋ ಈ ಜನ್ಮಕೆ ಮುಗಿಯಲಾರವೇನೊ ಎನಿಸುತ್ತಿದೆ ಕಣ್ರಿ.
       ಒಂದೇ ಒಂದು ಚಿಕ್ಕ ಬದುಕಿನಲ್ಲಿ ಈಗಾಗಲೆ ಅರ್ಧದಷ್ಟು ಮುರಿದು ತಿಂದಾಗಿ ಬಿಟ್ಟಿದೆ, ಉಳಿದೊಂದಿಷ್ಟು ಏನಾಗುವುದೊ ಅದಂತೂ.. ನಾ ಕಟ್ಟಿಕೊಂಡಿರುವ ಕನಸ್ಸುಗಳಿಗೆ ದೂರ, ವಿವರಿಸಲಾಗದ ಮಹಾಭಂಡಾರ, ಗುಡಾಣದ ಗುಹೆಯೊಳಗಿರುವ ನಿಗೂಢ ಸತ್ಯಗಳು, ಆಸೆಗಳನ್ನ ಬತ್ತಿಸಿ ಬಿಡುವಂತಹ ಬರಗಾಲ ಬಂದರೂ ಆಶ್ಚರ್ಯವಿಲ್ಲ ಬಿಡಿ. 
                                    ನಿನ್ನೆ ರಾತ್ರಿ  ಅದೊಂದು ಕೆಟ್ಟ ಆಲೋಚನೆಯೊಂದಿಗೆ ಕೈಗೆತ್ತಿಕೊಂಡು ಮೋಬೈಲ್ ನ್ನು ಸುಮ್ಮನೆ ಇರಲಿಲ್ಲ ನಾನು, ಇರಲಿ ನೋಡೋಣ ಅಂದುಕೊಂಡು ಪಟಪಟ ಅಂತ ಹತ್ತು ನಂಬರ್ ಗಳನ್ನ ವತ್ತಿಬಿಟ್ಟಿದ್ದೆ... ಅವು ನನ್ನ ತಲೆಯಿಂದ ಎಂದೆಂದೂ ಅಳಿಸಿಹೋಗದ ನಂಬರ್, ಈ ಎದೆಯಿಂದ ತಗೆದೆಸೆಯಲಾಗದ ಹಾಗೂ ನೆನಪುಗಳ ಹೆದ್ದಾರಿ ಗುರಿತಿಸಬಲ್ಲ ನಂಬರ್, ಸಾವಿರ ಕರ್ವ್ ಗಳು, ತಿರುವುಗಳು, ಕಲ್ಲು ಮುಳ್ಳುಗಳ ರಾಶಿ ತುಂಬಿದ್ದ ಪಾಳು ಬಿದ್ದ ಹಾಳು ಮನೆಗೆ ಕರೆದೋಗುವ ರಹದಾರಿಯ ಸೂಚಿಸುವ ನಂಬರ್ ಗಳೇ...ಇರಬೇಕು ಅವು!
          ’ ನಾನು ಸತ್ತುಹೋಗುತ್ತೇನೆ ನೋಡು....’  ಎನ್ನುವ ಸಣ್ಣ ನೆಪ ನಮ್ಮಿಬ್ಬರ ತುದಿ ಬಾಯಿಯಲ್ಲಿ  ಬಂದು ಒಬ್ಬರನ್ನೊಬ್ಬರು ಹೆದರಿಸಿಕೊಂಡು ಗೋಳಾಡುವ ಆ ಕ್ಷಣಗಳನ್ನ ಮತ್ತೆಂದಾದರೂ...ನೆನಪಿಸಿಕೊಂಡರೆ ನಗುಬರಬಹುದು...:-), ಇಲ್ಲ ಅಳುಬರಬಹುದು...:-(.
               ವಾಸಿಯಾಗಲು ಬಿಡದ ನೆನಪುಗಳನ್ನ ಮತ್ತೆ ಮತ್ತೆ ಕೆದುಕಿಕೊಂಡು, ಕೆರೆದುಕೊಂಡು ಗಾಯ ಮಾಯದಂತೆ ಹೆಚ್ಚೆಚ್ಚು ಮಾಡಿಕೊಳ್ಳುವ ನಾನು ಮೂರ್ಖನೇ..ಸರಿ,   ಅವಸರಕ್ಕೆ ಬಿದ್ದು ನನ್ನ ಬದುಕನ್ನೆ ಹಾಳುಬಾಡಿಕೊಂಡುಬಿಡುವೆನೆನೋ..!!? ಕುತೂಹಲಕ್ಕೆ ಕರಗಿ ಭಾವನೆಗಳಿಗೆ ರೆಕ್ಕೆ ಪುಕ್ಕ ಬೆಳೆಸಿ ಕಾಲ್ ಮಾಡಿ ಹಾರುತ್ತಿರುವ ಬೆಂಕಿಯನ್ನು ನಂದಿಸಿ   




;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;
ಮುಂದುವರಿಯುವುದು....ನೆನಪಿನ ಕಥೆ.... 













































































































































...................................................................................................................basu 

"ನನ್ ಮನದ ಮಾತು ಮನಸಿಗಾಗಿ"


Sunday, September 4, 2011

ನನ್ನ ಕವಿತೆ.... "ಏನಿತ್ತು ನಿನ್ನ ಮನದೊಳಗೆ?"


ನನ್ನ ಕವಿತೆ.... " ನನ್ನ ನಲ್ಲ"


"ಮನದ ಮಾತು" ಪ್ರೀತಿಗಾಗಿ.

ದಿನಾಂಕ: ೧೪.೦೮.೨೦೦೮ ರಲ್ಲಿ ಹೀಗೆ ಒಂದು ಪತ್ರ ಬರೆದೆ ನನ್ನವಳಿಗಾಗಿ....... 
ನೀವು ಓದಿಬಿಡಿ...
ನಂತರ ಸುಮ್ಮನೆ ನಕ್ಕುಬಿಡಿ...

       ಮನದ  ಏದುಸಿರಿನಲ್ಲಿ ಏರುಪೇರಿಲ್ಲದೆ ಒಂದೇ ಸಮನೇ ಗಿರಕೆ ಹೊಡೆಯುವ ಕೆಲವು ನೆನಪುಗಳು ಅದ್ಯಾಕೊ ಈ ಜನ್ಮಕ್ಕೆ ಮುಗಿಯಲಾರವೇನೋ..?
ಮುಷ್ಠಿ ಗಾತ್ರದ ಹೃದಯದಲ್ಲಿ ಅದೆಷ್ಟು ಕೋಟಿ ಕೋಟಿ ಕನಸ್ಸುಗಳು ಪೈಪೋಟಿಯಲ್ಲಿ ಸಾಲು ಸಾಲಾಗಿ ನಿಂತು ನಾ ಮುಂದು ತಾ ಮುಂದು ಅಂತ ಕಿತ್ತಾಡುತ್ತಿವೆ ಎಂದರೇ....? ಹೇಳಿಬಿಡಲು ನನಗೆ ನಾಚಿಕೆ ಅನಿಸಿಬಿಡಬಹುದು!.
        ಅದೃಷ್ಟ ಎನ್ನುವ ವಿಧಿ ಬರಹದಲ್ಲಿ ಅದೃಶ್ಯರಾಗಿ ಉಳಿದುಬಿಡುವ ಕೆಲವು ಸವಿನೆನಪುಗಳನೊತ್ತ ಕೆಲವು ಮನಸ್ಸುಗಳು ಯಾರದೊ ಒತ್ತಡಕ್ಕೆ ಮಣಿದು ಕಂಡು ಕಾಣದಂತೆ, ಕೇಳಿಯು ಕೇಳದಂತೆ, ಅತ್ತರೂ ನಕ್ಕಂತೆ ನಟಿಸಿ ನಡೆದು ಬಿಡುವ ವಿಪರ್ಯಾಸದ ಸುಳಿಯಲ್ಲಿ ಸಿಲುಕಿ ನಲುಗುವ ಪರಿಯ ನೀ ಅರಿಯಲಾರಯಾ ದೈವವೇ...?
        ಈ ದುಃಖ, ಸಂತೋಷ ಅಥವಾ ಮನದ ತಿಳಿ ಭಾವನೆಗಳನ್ನು ಬಗೆದು ಬಗೆದು ಹಂಚಿಬಿಡುವ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?!! ಕೈಗೆ ಸಿಕ್ಕಿದ್ದಷ್ಟು ಬಾಚಿ ಬಾಚಿ ಹಂಚಿ ಹಗುರಾಗಿ ಬಿಡಬಹುದಿತ್ತೇನೋ..! ಈ ಒಂದು ಸಣ್ಣ ಮನದ ಪುಟ್ಟ ಹೃದಯ ಕೋಣೆಯಲ್ಲಿ ಅದೆಷ್ಟು ಅಂತ ತುಂಬಿಸಿಕೊಳ್ಳೊದು?
              ನಡೆದು ಬಂದ ದಾರಿಯನ್ನು ಮರೆತುಬಿಡಬಹುದು,
              ಇಟ್ಟ ಹೆಜ್ಜೆ ಗುರುತನ್ನ ಅಳಿಸಿಬಿಡಬಹುದು, 
ಆದರೆ....
               ಸುಮಧುರ ಸಿಹಿ ನೆನಪುಗಳನ್ನೂ........???
" ಎತ್ತ ಹೊರಟೆ ಮನಸ್ಸೆ?
ನಿನ್ನ ಕಟ್ಟಿ ಹಾಕಿರುವುದು ದೈವ!
ಸುಟ್ಟುಬಿಡುವೆಯಾ... ನಿನ್ನೆಲ್ಲ ಕನಸ್ಸಾ?
ಇತ್ತ ಸಾಯಲು ಆಗದೆ
ಇತ್ತ ಬದುಕಲು ಆಗದೆ
ಹೆಣಗಾಡಿದೆ ನೆನಪುಗಳನ್ನೊತ್ತ ಈ ಜೀವ!

ಬಾಡಿ ಹೋಗುವ ಹೂವಾಗಿದ್ದರೆ ಚೆಂದ
ಕರಗಿ ಹೋಗುವ ಮೋಡವಾಗಿದ್ದರೆ ಚೆಂದ
ಒಣಗಿ ಹೋಗುವ ತರಗೆಲೆಯಾಗಿದ್ದರೂ.. ಚೆಂದ
ಮಾತು ಬಾರದಿರುವ ಮೂಖ ಪ್ರಾಣಿಯಾಗಿದ್ದರೂ ಚೆಂದ
ಆದರೆ ಗರಿಗೆದರಿ ನೋವುಗಳಿಗೆ ನೀರೇರೆದು ಹುರಿದುಂಬಿಸುವ ’ನೆನಪುಗಳಿಗೆ’
ಜೀವವಿತ್ತು ತಮಷೆ ಮಾಡುವ ಪರಿಯಂತ ಚೆಂದ?????
   
ಹಾಯ್..... 
              ಕ್ಷಮಿಸು ಏನೇನೋ...ಬರೆದು ಬಿಟ್ಟೆ ಅನಿಸುತ್ತೆ!!
 ನಿನ್ನ ಬದುಕಿನೊಳಗೆ ನಾನು ಬರಬಾರದಿತ್ತು ಆದರೆ ನಿನ್ನನ್ನು ಕೇಳದೆ ಬಂದುಬಿಟ್ಟೆ ದಯವಿಟ್ಟಿ ಕ್ಷಮೆ ಇರಲಿ, ನನ್ನ ಮಂಕು ಕವಿದ ಮಂದ ಬುದ್ಧಿಯಿಂದ ನಿನ್ನ ಸ್ನೇಹ ಕೊಂಡಲಿಗಳಿಗೆ ಕೊಡಲಿಯಾದೆ ದಯಮಾಡಿ ಕ್ಷಮಿಸಿಬಿಡು, ನಿನ್ನನ್ನು ಒಂದೇ ಒಂದು ಮಾತು ಕೂಡ ಕೇಳದೆ ನನ್ನೆದೆಯಲ್ಲಿ ನಿನ್ನೆಸರ ಪುಟ್ಟ ಅಲ್ಲ ಅಲ್ಲ ಬಲು ದೊಡ್ಡ... ಬಹಳ ದೊಡ್ಡ ಪ್ರೇಮ ಮಂದಿರವನ್ನು ನಾನೆ ಸ್ವತಃ ನಿರ್ಮಿಸಿಬಿಟ್ಟೆ, ಅದು ತಪ್ಪಲ್ಲ! ಆದರೆ ಅಲ್ಲಿ ನೀನು...ನೀನೊಬ್ಬಳೇ.. ಇರಬೇಕು ಅಂತ ಕನಸ್ಸು ಕಂಡೆ ಕೃಪೆತೋರಿ ಮನ್ನಿಸಿಬಿಡು.
      ಇಷ್ಟೆಲ್ಲ ತಿಳಿದ ಮೇಲೆ ನಿನಗೆ ಅನ್ನಿಸಿರಬಹುದು  ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ ಅಷ್ಟೆ ಅಂತ ಆದರೆ  ಈ ನನ್ನ ಎದೆಯ ಗರ್ಭಗುಡಿಯಲ್ಲಿ ನಿನ್ನದೊಂದೇ.. ಸಾಮ್ರಾಜ್ಯ ಅದನ್ನು ಆಳುವ ನೆನಪಿನ ದೊರೆ ನಾನೊಬ್ಬನೆ ನಾನೊಬ್ಬನೆ ಅಲ್ಲಿಗೆ ಯಾವುದೇ ನರಪಿಳ್ಳೆಗೂ ಪ್ರವೇಶವಿಲ್ಲ ಅಲ್ಲಿ ನೀನು ಮಾತ್ರ ಪ್ರತಿಸ್ಥಾ ಪನೆಗೊಂಡಿರುವವಳು ಮತ್ಯಾರೆ ಬಂದರು ಗುಡಿಯ ಬಾಗಿಲಲ್ಲಿ ನಿಂತು ಹೋಗಬೇಕಷ್ಟೆ.
           ಪಾಪು! ಪ್ರೀತಿ ಎನ್ನುವ ಎರಡುವರೆ ಅಕ್ಷರವನ್ನಾ ನಿನಗೆ ತಿಳಿಯದಲೆ ಅದೆಷ್ಟು ಅಂದವಾಗಿ, ಅದ್ಭುತವಾಗಿ ಕೆತ್ತಿಬಿಟ್ಟೆ? ನಿಜಕ್ಕೂ ಈ ಜನ್ಮದಲ್ಲಿ ಮರೆಯಲಾಗದ, ತೊರೆಯಲಾಗದ ’ಪ್ರೀತಿ’ ಎಂದರೆ..... ಅದು ನೀನು ಮಾತ್ರ.
ಈ ಎರಡುವರೆ ಅಕ್ಷರದಲ್ಲಿ ಸ್ವಲ್ಪ ಕೂಡ ಕದಿಯುವ ಯಾವ ಜೀವಿ ಕೂಡ  ಈ ಭೂಮಿಯಲ್ಲಿ ಹುಟ್ಟಿರಲಾರದು ಎನಿಸುತ್ತದೆ. ನನ್ನ ಅಮಾಯಕ ಎದೆಯಲ್ಲಿ ನೀ ಬರೆದ ಪ್ರೀತಿ ಪುಟಗಳು  ಈ ಜನ್ಮ ಅಲ್ಲ ಇನ್ನಾವ ಜನ್ಮದಲ್ಲೂ ನಾಶವಾಗಲಾರವು. ನನ್ನ ಬದುಕಿನ ಪ್ರೇಮ ಪುಸ್ತಕದಲ್ಲಿ ಮೊದಲನೆ ಸಾಲಿನ ಮೊದಲನೆ ಪದವಾದ ನಿನಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.
                                     ತಿಳಿದೊ, ತಿಳಿಯದೆಯೋ ನನ್ನಿಂದ ಏನಾದರೂ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿಬಿಡು, ನೀನು ಸಿಗಲಿಲ್ಲವಲ್ಲ ಅನ್ನುವ ನೋವು ನನ್ನಲ್ಲಿರಬಹುದು ಆದರೆ ಅದು ನಿನ್ನ ಸಂತೋಷಕ್ಕೆ, ನಿನ್ನ ನೆಮ್ಮದಿಗೆ ಎಂದೆಂದೂ ಕೆಡಕು ಬಯಸುವುವಂತದ್ದಲ್ಲ........
         ಈ ಭೂಮಿಯಲ್ಲಿ ಬಹಳ ಅಪರೂಪ ಎನ್ನುವುದೆಲ್ಲ  ನಿನ್ನದಾಗಲಿ ಎನ್ನುವ ಬಯಕೆ ನನ್ನದು.
        ತುಡಿತ ತುಂಬಿದ ಬಡಿತದಲ್ಲಿ ನೋವುಗಳಿಲ್ಲದ ಬದುಕು ನಿನ್ನದಾಗಲಿ ಎನ್ನುವ ಆಸೆ ನನ್ನದು.
       ಅಂದ ಚಂದದೊಂದಿಗೆ ಬಂದಿಯಾದ ಆನಂದವೆಲ್ಲ ನಿನ್ನೊಬ್ಬಳಿಗೆ ಸಿಗಲಿ ಎನ್ನುವ ಸ್ವಾರ್ಥ ನನ್ನದು.
ನಿನ್ನ ಇಷ್ಟದಂತೆ ನಿನ್ನ ಬದುಕೆಲ್ಲ ಬಂಗಾರವಾಗಲಿ ಎಂದು ಹಾರೈಸುತ್ತಾ....................
                                                                                  ..............ಬಸು"

"ಮನದ ಮಾತು" ನನ್ನ ತಂಗಿಗಾಗಿ

ನನ್ನ ಮುದ್ದು ತಂಗಿ... "ಅಂಬು"
     ಅಂಬು.....
ಉಸಿರು ಕಟ್ಟಿದಂತಿದೆ
ಮನವೆಲ್ಲ ಮರುಗಟ್ಟಿದಂತಿದೆ
ಎದೆಯಲ್ಲಿ ಉಳಿದ ನಿನ್ನ ನೆನಪುಗಳು
ಗುಣುಗುಟ್ಟಿದಂತಿದೆ!
ನೀನೇಕೆ ನಮ್ಮಿಂದ ಬಲು ದೂರ ಹೋದೆ?
ಅಷ್ಟೊಂದು ದೂರಾ?
ನಾ ಬರಲಾರದಷ್ಟು ದೂರ?
ನಿನ್ನ ಮತ್ತೆ ನೋಡಲಾಗದಷ್ಟು ದೂರ?
ಕಣ್ಣುಗಳು ಬಯಸಿದರು 
ಕಾಣಸಿಗದಷ್ಟು ದೂರಾ?
ಮಾತಾಡಲು ಸಾವಿರಾರು ವಿಷಯ
ನಿನಗಾಗಿ ಇದ್ದರೂ...
ನೀ ಕೇಳಿಸಿಕೊಳ್ಳಲಾಗದಷ್ಟು ದೂರ?
ಇದೆಂಥ ಮೋಸಾ????????
ಇನ್ನೂ ಎಷ್ಟೊಂದು ಪ್ರೀತಿ ಕೋಡೋದು 
 ಬಾಕಿ ಇತ್ತೂ.....
 ನಿನ್ನ ಬಾಚಿ ತಬ್ಬಿಕೊಂಡು ನನ್ನ ಪ್ರಾಣ
 ನೀನು ಅಂಥ ಮುದ್ದಾಡೋದು ಇತ್ತೂ..
 ನಿನ್ನ ಸಂತೊಷ, ನಿನ್ನ ಸುಖ ಬದುಕನ್ನು ಈ ನನ್ನ
ಬಡ ಕಣ್ಣುಗಳು ನೋಡಿ  ತುಂಬಿಕೊಳ್ಳೊ  ಬಾಗ್ಯ ಬಾಕಿ ಇತ್ತೂ....
 ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು
 ಯಾವ ನ್ಯಾಯ ತಂಗಿ...????????
 "ನಿನ್ನ ಆತ್ಮಕ್ಕೆ ಚಿರ ಶಾಂತಿ  ಸಿಗಲಿ"
ಮತ್ತೆ ನೀ ನನ್ನ ತಂಗಿಯಾಗೆ..... ಹುಟ್ಟಿ ಬಾ ಅಂಬು
 .................ಇಂತಿ ನಿನ್ನ ಪಾಪಿ ಅಣ್ಣ ಬಸು





Saturday, September 3, 2011

ಮನದ ಮಾತು..." ಹಸಿ ಮನದ ಸಿಹಿ ಭಾವನೆ"



"ಮನ ಮೆಚ್ಚುವ ಕೆಲಸ ಮಾಡು" ಅಂತ ದೊಡ್ಡೊರು ಹೇಳ್ತಾರೆ.. ಅಂದರೆ ಮೊದಲು ನಾವು ಮಾಡುವ ಕೆಲಸಗಳನ್ನು ನಮ್ಮ ಮನಸ್ಸು ಒಪ್ಪಬೇಕು ಎಂದರ್ಥ.  ನಂತರ ಈ ಜನ, ಈ ಪ್ರಪಂಚದ ಒಪ್ಪಿಗೆ...
ಹಾ... ನಮ್ಮ ಕೆಲಸವನ್ನ ನಮ್ಮ ಮನಸ್ಸು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಏನಾದರೊಂದು ತಗಾದೆ ತಗೆದು ಕೆಣಕುತ್ತದೆ, ನಿಂದಿಸುತ್ತದೆ.  ’ಅದು ಒಳ್ಳೆಯದಕ್ಕೆ ಇರಬಹುದು ಕೂಡ’! 
ಆದರೆ ಬೇರೆಯವರಿಂದ ಮೆಚ್ಚಿಸಿಕೊಳ್ಳುವುದು ತುಂಬ ಸುಲಭ..... 
ಅದು ಹೇಗೆ ಅಂದರೆ, ಯಾರೆ ಆದರೂ ಅಷ್ಟೆ ಕಣ್ರೀ... ಒಂಚೂರ್ ಏನಾದರೂ ಸಹಯಾ ಮಾಡಿ ಆಗೊ ಇಗೊ ಒಂದೆರಡು ಒಳ್ಳೆ ಮಾತುಗಳನ್ನ ಆಡಿಬಿಟ್ಟರೆ ಸಾಕು ಒಂದ್ ಮಟ್ಟಕ್ಕೆ ನಮ್ಮನ್ನ ಒಳ್ಳೆಯವನು/ಳು ಅಂತ ಅಂದ್ಕೊಬಿಡ್ತಾರೆ. 
ಆದ್ರೆ ನಮ್ಮ ಮನಸ್ಸು ಆಗಲ್ಲ ನೀನು ಅವರಿಂದ ಹೇಗೆ ಒಳ್ಳೆಯವನು/ಳು ಅನ್ನಿಸಿಕೊಂಡೆ ಅಂತ ಕೂಡ ತಿಳ್ಕೊಂಡಿರುತ್ತೆ  ನಿನ್ನ ಉದ್ದೇಶ ಒಳ್ಳೆಯದೆ ಆಗಿದ್ದಲ್ಲಿ ಖಂಡಿತ ನಿನ್ನನ್ನ ಪ್ರಶಂಸಿತ್ತದೆ, ಹೊಗಳುತ್ತದೆ, ಒಳಗೊಳಗೆ ಉಲ್ಲಸಗೊಳ್ಳುತ್ತದೆ, ನಗುತ್ತದೆ, ಕುಣಿಯುತ್ತದೆ, ಕುಪ್ಪಳಿಸುತ್ತದೆ. ಆಗ ಸಿಗುವ ಖುಷಿಯೇ.... ನಿಜವಾದ ಸಂತೋಷ. ಅಲ್ಲಿ ನಿಷ್ಕಲ್ಮಸವಾದ ಒಂದು ತೃಪ್ತಿ ಇರುತ್ತದೆ ಏನೇ ಕಷ್ಟಗಳು ಏದುರಾದರು ಒಳ್ಳೆಯದು ನನ್ನ ಹಿಂದಿದೆ ಅನ್ನೊ ದೈರ್ಯ ತುಂಬಿರುತ್ತದೆ.
ಆದರೆ ಜನಗಳ ಕಣ್ಣಿಗೆ ಒಳ್ಳೆಯವನಾಗ/ಳಾಗ ಬೇಕು ಎಂದು ಮನದಲ್ಲಿ ಒಲಸು ತುಂಬಿಕೊಂಡು ಬಾಯಿಯಲ್ಲಿ ಅಮೃತಾ ಸುರಿಸಿ, ಬೇರೆಯವರು ನೋಡುವಾಗ ಮಾತ್ರ ಒಳ್ಳೆಯವನಂತೆ/ಳಂತೆ ನಟಿಸಿದರೆ..... ನೆನೆಪಿರಲಿ ನಮ್ಮ ಮನಸ್ಸು ಯಾವತ್ತು ನಮ್ಮನ್ನ ಒಳ್ಳೆಯವನು/ಳು ಎಂದು ಒಪ್ಪಿಕೊಳ್ಳುವುದಿಲ್ಲ.... (ಏಕೆಂದರೆ ನಾವುಗಳು ಅದಕ್ಕೆ ಎಲ್ಲ ತಿಳಿಸಿಯೇ.. ಮುಂದುವರಿಯಬೇಕು ಅಲ್ವ?)  ನಮ್ಮ ನಗು ಹೊರಗಿನ ಪ್ರಪಂಚಕ್ಕೆ ಮಾತ್ರ ಸೀಮಿತವಾದದ್ದು, ನಮ್ಮ ಮನಸ್ಸು ಮಾತ್ರ  ನಮ್ಮನ್ನು ನಿಂದಸಿ, ಶಾಪಿಸಿ, ನಮ್ಮ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸುವಂತೆ  ಮಾಡೇ..ತೀರುತ್ತದೆ ಅದು ಎಂತಾ ಕಟುಕನಾದರು ಸರಿ ಕಟುಕಿಯಾದರು ಸರಿ.
  "ನಮಗೆ ಬೇರೆಯವರು ಕೊಡುವ ಶಿಕ್ಷೆಗಿಂತ ನಮಗೆ ನಾವು ಮಾಡಿಕೊಳ್ಳುವ ಶಿಕ್ಷೆ ತುಂಬ ನೋವಾಗುವಂತದ್ದು"

ನನ್ನ ಆಸೆ ಇಷ್ಟೇ... ಎಲ್ಲರೂ ತಮ್ಮ ತಮ್ಮ ಮನಸ್ಸಿಗೆ ಮೆಚ್ಚಿಗೆ ಆಗುವಂತೆ ನಡೆದುಕೊಳ್ಳಲಿ ಅಂತಾ.. ನಮ್ಮ ಮನಸ್ಸುಗಳಿಂದ ನಾವು ಯಾವಾಗಲು ಶಾಭ್ಬಷ್ ಅನ್ನಿಸಿಕೊಂಡುಬಿಡೋಣ ಈ  ಜನ್ಮ ಇರೊವರೆಗೂ.... ಏನಂತೀರಾ....?

ಇದು ನನ್ನ ಅನಿಸಿಕೆ........
 ನಿಮ್ಮ ಅಭಿಪ್ರಾಯಾ......?




ೇಸ್ದ್ಲೋಲೋನ್ಲೋಲೋೋಲೋ್ಿಲೋಸ್ದ್ಫ಼್