Showing posts with label "ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ". Show all posts
Showing posts with label "ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ". Show all posts

Thursday, September 8, 2011

ಮನದ ನುಡಿ........."ಒಂದಿಡಿ ನೆನಪುಗಳನ್ನ ಮೆಲಕು ಹಾಕಿದಾಗ"

      ಆ ಒಂದಿಡಿ ನೆನಪುಗಳು ನನ್ನ ಈ ಪುಟ್ಟ ಹೃದಯ ಪಡಸಾಲೆಯಲ್ಲಿ ಕುಳಿತು ಅದೆಷ್ಟು ಕಾಡುತ್ತಿವೆ ಎಂದರೆ!?  ಕಣ್ಣು ನನ್ನದೆ ಆದರೂ ನೋಟ ಇನ್ಯಾರದೋ...!  ಕಾಲುಗಳು ನನ್ನವೆಯಾದರು ನಡಿಗೆ ಮಾತ್ರ ಮತ್ಯಾರದೋ...! ನನ್ನನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ಆ ನೆನಪುಗಳು ಅದ್ಯಾಕೋ ಈ ಜನ್ಮಕೆ ಮುಗಿಯಲಾರವೇನೊ ಎನಿಸುತ್ತಿದೆ ಕಣ್ರಿ.
       ಒಂದೇ ಒಂದು ಚಿಕ್ಕ ಬದುಕಿನಲ್ಲಿ ಈಗಾಗಲೆ ಅರ್ಧದಷ್ಟು ಮುರಿದು ತಿಂದಾಗಿ ಬಿಟ್ಟಿದೆ, ಉಳಿದೊಂದಿಷ್ಟು ಏನಾಗುವುದೊ ಅದಂತೂ.. ನಾ ಕಟ್ಟಿಕೊಂಡಿರುವ ಕನಸ್ಸುಗಳಿಗೆ ದೂರ, ವಿವರಿಸಲಾಗದ ಮಹಾಭಂಡಾರ, ಗುಡಾಣದ ಗುಹೆಯೊಳಗಿರುವ ನಿಗೂಢ ಸತ್ಯಗಳು, ಆಸೆಗಳನ್ನ ಬತ್ತಿಸಿ ಬಿಡುವಂತಹ ಬರಗಾಲ ಬಂದರೂ ಆಶ್ಚರ್ಯವಿಲ್ಲ ಬಿಡಿ. 
                                    ನಿನ್ನೆ ರಾತ್ರಿ  ಅದೊಂದು ಕೆಟ್ಟ ಆಲೋಚನೆಯೊಂದಿಗೆ ಕೈಗೆತ್ತಿಕೊಂಡು ಮೋಬೈಲ್ ನ್ನು ಸುಮ್ಮನೆ ಇರಲಿಲ್ಲ ನಾನು, ಇರಲಿ ನೋಡೋಣ ಅಂದುಕೊಂಡು ಪಟಪಟ ಅಂತ ಹತ್ತು ನಂಬರ್ ಗಳನ್ನ ವತ್ತಿಬಿಟ್ಟಿದ್ದೆ... ಅವು ನನ್ನ ತಲೆಯಿಂದ ಎಂದೆಂದೂ ಅಳಿಸಿಹೋಗದ ನಂಬರ್, ಈ ಎದೆಯಿಂದ ತಗೆದೆಸೆಯಲಾಗದ ಹಾಗೂ ನೆನಪುಗಳ ಹೆದ್ದಾರಿ ಗುರಿತಿಸಬಲ್ಲ ನಂಬರ್, ಸಾವಿರ ಕರ್ವ್ ಗಳು, ತಿರುವುಗಳು, ಕಲ್ಲು ಮುಳ್ಳುಗಳ ರಾಶಿ ತುಂಬಿದ್ದ ಪಾಳು ಬಿದ್ದ ಹಾಳು ಮನೆಗೆ ಕರೆದೋಗುವ ರಹದಾರಿಯ ಸೂಚಿಸುವ ನಂಬರ್ ಗಳೇ...ಇರಬೇಕು ಅವು!
          ’ ನಾನು ಸತ್ತುಹೋಗುತ್ತೇನೆ ನೋಡು....’  ಎನ್ನುವ ಸಣ್ಣ ನೆಪ ನಮ್ಮಿಬ್ಬರ ತುದಿ ಬಾಯಿಯಲ್ಲಿ  ಬಂದು ಒಬ್ಬರನ್ನೊಬ್ಬರು ಹೆದರಿಸಿಕೊಂಡು ಗೋಳಾಡುವ ಆ ಕ್ಷಣಗಳನ್ನ ಮತ್ತೆಂದಾದರೂ...ನೆನಪಿಸಿಕೊಂಡರೆ ನಗುಬರಬಹುದು...:-), ಇಲ್ಲ ಅಳುಬರಬಹುದು...:-(.
               ವಾಸಿಯಾಗಲು ಬಿಡದ ನೆನಪುಗಳನ್ನ ಮತ್ತೆ ಮತ್ತೆ ಕೆದುಕಿಕೊಂಡು, ಕೆರೆದುಕೊಂಡು ಗಾಯ ಮಾಯದಂತೆ ಹೆಚ್ಚೆಚ್ಚು ಮಾಡಿಕೊಳ್ಳುವ ನಾನು ಮೂರ್ಖನೇ..ಸರಿ,   ಅವಸರಕ್ಕೆ ಬಿದ್ದು ನನ್ನ ಬದುಕನ್ನೆ ಹಾಳುಬಾಡಿಕೊಂಡುಬಿಡುವೆನೆನೋ..!!? ಕುತೂಹಲಕ್ಕೆ ಕರಗಿ ಭಾವನೆಗಳಿಗೆ ರೆಕ್ಕೆ ಪುಕ್ಕ ಬೆಳೆಸಿ ಕಾಲ್ ಮಾಡಿ ಹಾರುತ್ತಿರುವ ಬೆಂಕಿಯನ್ನು ನಂದಿಸಿ   




;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;;
ಮುಂದುವರಿಯುವುದು....ನೆನಪಿನ ಕಥೆ.... 













































































































































...................................................................................................................basu