Friday, January 11, 2013


ನಲ್ಲ ಪ್ರಶ್ನೆ ನಿನ’ಗಲ್ಲ’! 


 ತಂಗಾಳಿಯಾಗಿ ತಗುಲಲೆ 
 ಮುಗಿಲ ಮೌನಿಯಾದ ನಿನ್ನಾ....? 

 ನದಿಯಾಗಿ ಹರಿದರಿದು ಸಾಗಲೆ 
 ಕಡಲ ಧ್ಯಾನದಲ್ಲಿರುವ ನಿನ್ನಾ...? 

 ಬಣ್ಣದ ಬಿಲ್ಲಾಗಿ ನಿನ್ನೊಡಲ ಸೇರಲೆ 
 ಮಳೆಯಲಿ ಬಿಸಿಲಾಗಿರುವ ನಿನ್ನಾ..? 

 ಸುಗಂಧವಾಗಿ ಘಮಘಮಿಸುವಂತಾಗಲೆ 
 ಮುಳ್ಳಲಿ ಹೂವಾಗಿರುವ ನಿನ್ನಾ...? 

 ಅಲೆ ಅಲೆಯಾಗಿ ತಲುಪಿ ಬಿಡಲೆ 
 ಸಾಗರದ ಅಂಗಲಿ ದಡವಾಗಿರುವ ನಿನ್ನಾ..? 

 ಇಂಚರದ ಸಂಗೀತ ಸುಧೆಯಾಗಿ ಕೂಡಲೆ 
 ತಂತಿಯಲಿ ವೀಣೆಯಾಗಿ ಅಡಗಿರುವ ನಿನ್ನಾ..? 

 ನೀನೇ ತಾನೆ ನನಗೆಲ್ಲ ನನ್ನ ನಲ್ಲ 
 ನೀನಿಲ್ಲದೆ ನಾನೆಲ್ಲ ಶೂನ್ಯವಲ್ಲದೆ ಬೇರೇನು ಅಲ್ಲ 

 ............................................ಬಸು 

No comments:

Post a Comment