
|
ಹೊಸ ವರ್ಷದ ಹಾರ್ಧಿಕ
ಶುಭಾಷಯಗಳು?
|
ಯಾವುದು ಹೊಸ ವರ್ಷ? ಯಾರಿಗೆ ಹೊಸ ವರ್ಷ? ಏನಿದು ಹೊಸ
ವರ್ಷ? |
ಅವೆ ಕ್ಷಣಗಳು.. |
ಅವೆ ದಿನಗಳು.. |
ಅವೆ ವಾರಗಳು.. |
ಅವೆ ತಿಂಗಳುಗಳು.. |
ಅವೆ ದಿನಾ ’ಅಂಕಿ’ ಅಂಶಗಳು.. |
ಅವೆ ಕೊಳೆತೆ ಮನಸ್ಸುಗಳು |
ಅವೆ ಹುಳುಕು ದೇಹಗಳು |
ಭ್ರಷ್ಟಾಚಾರದ ಅಭದ್ರ ರಾಜ್ಯಗಳು |
ಶಿಷ್ಟಾಚಾರ ಮರೆತ ಮಲಿನ ಭ್ರಾಂತಿಯ ಜಾತಿ ಮತಗಳು |
ಇನ್ನೇನಿದೆ ಇಲ್ಲಿ ಹೊಸತನದ ಗಮಲು? ಮತ್ತೇಕೆ ಈ
ಹೊಸವರ್ಷಾಚಾರಣೆ ಮತ್ತದೆ ಕೊಳಕು ಮನಗಳಲಿ? |
ಏನೇನು ಬದಲಾಗದ ನಾವು ಹೊಸತನವನ್ನು ಆಚರಿಸಲು ಎಷ್ಟು
ಯೋಗ್ಯರು? |
ಹಾದಿ ಬೀದಿಯಲ್ಲಿ ಕಿರುಚಾಡಿ ಊರಿಗೂರೆ ಗುಡುಗುವಂತೆ
ಸದ್ದು ಗದ್ದಲ ಮಾಡಿಕೊಂಡು ನಟ್ಟನಡು ರಾತ್ರಿಯಲ್ಲಿ
ಕುಡಿದ ಅಮಲಿನಲ್ಲ್ಲಿ |
ತೂರಾಡಿಕೊಂಡು ಪುಂಡ ಪೋಕರಿಗಳು ಗೊಳ್ಳೋ.. ಎಂದು,
ಸಿಕ್ಕ ಸಿಕ್ಕವರಿಗೆ(ಹ್ಯಾಪಿ ನಿವ್ ಯಿಯರ್ ಗುರು)
ತೊಂದರೆ ಮಾಡಿಕೊಂಡು |
ಎಲ್ಲೆಲ್ಲಿಂದಲೋ ಹೆಕ್ಕಿ ತಂದ ಹಣದಿಂದ ಡಬ್ ಡುಬ್ ಅಂತ
ಪಟಾಕಿ ಸಿಡಿಸಿ ಜೊತೆಗೊಂದಿಷ್ಟು ವಾಯು ಮಾಲಿನ್ಯ
ಮಾಡಿಕೊಂಡು |
ನಿದ್ದೆಗೆಟ್ಟು ಹೊಸವರ್ಷಾಚರಣೆ ಅಂತ ಒಂದಿಷ್ಟು
ಕಾಲಾಹರಣ ಮಾಡೋದು, ಇದೆ ಅಲ್ವ ನಮ್ಮೂರಲ್ಲಿ ನಡೆಯೋ ಹೊಸ
ವರ್ಷಾದ ಸಂಭ್ರಮ? |
ಅಲ್ಲಲ್ಲಿ ಸುಮ್ ಸುಮ್ನ್ ಜಗಳ ತಗೆದು ಹೊಡೆದಾಡಿ ರಂಪ
ಮಾಡೋದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರೋದು |
ಮನೆಗಳಲ್ಲಿ ರಾತ್ರಿಯಲ್ಲ ನಿದ್ದೆ ಗೆಟ್ಟು ಕೇಕ್ ಕಟ್
ಮಾಡಿ ಕೇಕೆ ಹಾಕಿ ಮಲಗಿರೋರ್ ನಿದ್ದೆಗೆಡಸಿ ಸುಳ್ ಸುಳ್ ನಗುವಿಗೆ
ಪಾತ್ರರಾಗೋದು |
ಇದೆ ತಾನೆ ನಾವು ಮಾಡೋ ಗಣಂದಾರಿ
ಹೊಸವರ್ಷಾಚರಣೆ...? |
ಹಾಂ... ಇನ್ನೂ ಹೊಸವರ್ಷದಿಂದ ನಾನು ಕುಡಿಯೊ ಚಟ
ಬಿಟ್ಬಿಡಿತೀನಿ ಮಗ, ನಾನು ಶ್ರಮ ವಹಿಸಿ ಕೆಲಸ ಮಾಡಿ
ಒಳ್ಳೆ ಹೆಸರನ್ನ ಗಳಿಸ್ತೀನಿ |
ಹಾಂ... ಇನ್ನೆಂದೂ ಕಳ್ಳತನ ಮಾಡಲ್ಲಪ್ಪ, ಸುಳ್ಳೇಳಿ
ಮನೆಯವರ ಹತ್ತಿರಿ ಕಾಸ್ ಕಿತ್ತು ಸಿನಿಮಾ ನೋಡೊಲ್ಲ
ಚೆನ್ನಾಗೆ ಓದಿ ಒಳ್ಳೆ ಅಂಕ ತೇಗಿತೀನಿ ಕಣೆ
ನಾನು |
ಹಾಂ..ಇನ್ನೂ ನಮ್ ಮನೆಯವರಿಗೆ ಅದು ಬೇಕು ಇದು ಬೇಕು
ಅಂತ ಪ್ರಾಣ ತಿನ್ನೊಲ್ಲಪ್ಪ ಅಂತೆಲ್ಲ ರೆಸಲೂಸನ್
ಮಾಡ್ಕೊಳುದು, ನಿಜವಾಗ್ಲು ಇದನ್ನೆಲ್ಲ ಯಾರು
ಎಷ್ಟು ದಿನ ಪಾಲಿಸುತ್ತಾರೆ |
ಹುಟ್ಟಿದ ಗುಣ ಸುಟ್ಟರು ಹೋಗಲ್ಲ ಅಂದಾಗೆ ಮೂರ್
ದಿನಾಕ್ಕೊ ನಾಲ್ಕು ದಿನಕ್ಕೊ ಮರೆತು ಮಾಮುಲಿ ಆಗ್ಬಿಡ್ತೀವಿ ಅಲ್ವ?
ನಿಜಾ ತಾನೆ!? |
ಆದರೆ, ಮರ ಗಿಡಗಳು ಪ್ರತಿ ವಸಂತಕ್ಕೂ ತಮ್ಮೆಲ್ಲ
ಎಲೆಗಳನ್ನು ಉದುರುಸಿಕೊಂಡು ಹೊಸದಾಗಿ ಹಸಿರ ಉಡುಗೆ
ಹುಟ್ಟು ಮೈ ತುಂದುಕೊಂಡು
ನಲಿದಾಡುತ್ತವೆ |
ಹಾಗೂ ಎಲ್ಲೆಲ್ಲಿಂದಲೋ ಓಡೋಡಿ ಬರುವ ಹಕ್ಕಿ
ಪಕ್ಷಿಗಳಿಗೆ ಮನೆಯಾಗುತ್ತವೆ, ಆ ಹಕ್ಕಿಗಳಲ್ಲೊ ಎಲ್ಲಿಲ್ಲದ ಲವಲವಿಕೆ
ಕೂಗಾಟ, ಕಿರುಚಾಟ ಇಂಪಾದ
ಮುದದಾಟ |
ಎಷ್ಟು ಚಂದ ಅನಿಬಿಡುತ್ತದೆ ಅಲ್ವ? ಅದು ಹೊಸತನ
ಅಂದ್ರೆ! |
ಹಾವು ತನ್ನ ಮುದಿ ಮೈನ ಮೇಲಿನ ಚರ್ಮವನ್ನೂ
ಕಿತ್ತೊಗೆದು ಅಂದೊಮ್ಮೆ ಮಿರಿಮಿರಿ ಮಿಂಚುತ್ತಾ ಅಲ್ಲಲ್ಲಿ
ಹೆದರುತ್ತಾ... ಎಡೆ ಎತ್ತಿ ನಿಂತರೆ
ಎಷ್ಟು ಭಯದಾನಂದ ಅಲ್ವ? |
ಅದು ಹೊಸತನ ಅಂದ್ರೆ! |
ಆದರೆ... ನಮ್ಮಲ್ಲೇನಿದೆ ಹೊಸತನ ಈ ಹೊಸ ಹೊಸದಾಗಿ
ಪ್ರತಿ ವರ್ಷ ಬಂದೋಗುವ ಅವೆ ಹಳೆ ದಿನಗಳಲ್ಲಿ? |
ಒಂದಂತು ನಿಜ ನಾವು ನಿರೀಕ್ಷಿಸದೆ ಬರುವ ಪ್ರತಿ
ಕ್ಷಣವು ಹೊಸದೇ, ಆ ಕ್ಷಣ, ದಿನಗಳನ್ನ ಹೇಗೆ
ಉಪಯೋಗಿಸಿಕೊಳ್ಳುತ್ತೇವೆ ಅನ್ನೋದು ಮುಖ್ಯ? |
ನಾವು ನಮಗೆಷ್ಟು ಮಾಡಿಕೊಂಡೆವು ಅನ್ನೊದಕಿಂತ
ಬೇರೆಯವರಿಗೆಷ್ಟು ಉಪಕಾರಿಯಾದೆವು ಎನ್ನುವುದು
ತುಂಬ ಖುಷಿಕೊಡುತ್ತದೆ |
ಪ್ರತಿಸಲ ಬೇರೆಯವರನ್ನ ದೂಷಿಸಿಕೊಂಡೆ ಕಾಲ
ಕಳೆದುಬಿಡುತ್ತೇವೆ ಅದು ತಪ್ಪು ನಮ್ಮದೆ ಆಗಿದ್ದರು. |
ಈ ದೇಶ ಭ್ರಷ್ಟಾಚಾರದಿಂದ ತುಂಬಿ ಹೊಯ್ತು,
ರಾಜಕೀಯದಿಂದ ಎಲ್ಲ ಹಾಳಾಗಿ ಹೋಯ್ತು, ಅವನು ಸರಿಯಿಲ್ಲ
ಇವನು ಸರಿಯಿಲ್ಲ ಅಂತೆಲ್ಲ
ಬೇರೆಯವರನ್ನು |
ಬಾಯಿಗೆ ಬಂದಾಗೆ ಬೈದುಕೊಂಡುಬಿಡುತ್ತೇವೆ.. ಆದರೆ
ಒಮ್ಮೆ ಯೋಚನೆ ಮಾಡಿ ನೋಡಿ ನಾನು ಸರಿಯಿದ್ದೇನಾ?
ಈ ದೇಶಕ್ಕೆ ಈ ಸಮಾಜಕ್ಕೆ ನಾನೇನೆಷ್ಟು
ಉಪಚರಿಸಿದ್ದೇನೆ ಎಂದು |
ಶೂನ್ಯ!.
ನಮ್ಮ ಜನಗಳಿಗೆ ನನ್ನದು ಎನ್ನುವುದು ತಮ್ಮ ತಮ್ಮ ಮನೆ,ಬಂಧು ಬಾಂಧವರಿಗೆ ಮಿಸಲಾಗಿದೆ
ಮತ್ತೇಗೆ
ನಮ್ಮ ದೇಶ ಎಲ್ಲ ಇದ್ದು ಸಿರಿವಂತ ದೇಶವಾಗೋದು? ಮತ್ತೇಗೆ ನಮ್ಮ ದೇಶದಲ್ಲಿರೊ ಜನಗಳು |
ಬಡತನದಿಂದ ಹೊರಬರೋದು, ನಮ್ಮ ಮನೆಯಂಗಳದ ಕಸವನ್ನು
ರಸ್ತೆಗೆ ಗುಡಿಸಿಬಿಡುತ್ತೇವೆ.. ಅಂದರೆ ಅಂಗಳ ನಮ್ಮದು.
ರಸ್ತೆ ಯಾರದು? ಸರಕಾರದ್ದೆ? ಸರಕಾರ ಎಂದರೆ ಯಾರು? |
ನಿಜಕ್ಕೂ ’ಸೂಪರ್” ಚಿತ್ರ ನೆನೆಪಾಗುತ್ತದೆ
ಉಪೇಂದ್ರರವರ ಆ ಅದ್ಭುತ ಕಲ್ಪನೆ ನಿಜವಾಗಬಾರದೇಕೆ ಎನಿಸುತದೆ. |
ಸುಖಸುಮ್ಮನೆ ಈ ರೀತಿಯ ಆಚಾರಣೆಗಳಿಂದ
ಮೂಢರಾಗುತ್ತಿದ್ದೆವೆ ಎನಿಸುತಿದೆ, ಹಣ ಕಾಲ ಎಲ್ಲವನ್ನು
ವ್ಯಾರ್ತಮಾಡುತ್ತಿದ್ದೇವೆ
ಎನಿಸುತಿದೆ, |
ತುತ್ತಿಗಾಗಿ ಚಡಪಡಿಸೋ ಜೀವಿಗಳು ನಮ್ಮ
ಅಕ್ಕ-ಪಕ್ಕದಲ್ಲೇ ಇದ್ದರೂ ಮರೆತೆದ್ದೆವೆ ಎನಿಸುತ್ತಿದೆ, ಪ್ರೀತಿ,
ವಿಶ್ವಾಸವನ್ನು ತೊರೆದು
ಕೋಪ ತಾಪಕ್ಕೆ ಮನಸ್ಸೊಡ್ಡಿದ್ದೇವೆ ಎನಿಸುತಿದೆ, |
ಪ್ರೀತಿಯಿಂದ, ಒಳ್ಳೆತನವ ಮೈಗೂಡಿಸಿಕೊಳ್ಳುವುದರಿಂದ,
ಕಷ್ಟದಲ್ಲಿರುವವರಿಗೆ ಸಹಾಯಕರಾಗುವುದರಿಂದ,
ಪ್ರತಿ ಕ್ಷಣವನ್ನು ಆಚಾರಿಸೋಣ ಪ್ರತಿ ದಿನವನ್ನು
ಸಂಭ್ರಮಿಸೋಣ |
ಜನವರಿ ಒಂದರ ಆಚಾರಣೆ ಒಂದು ದಿನಕ್ಕೆ ವಿಸಲಿಡದೆ
ಪ್ರತಿಕ್ಷಣವು ಹೊಸತನವನ್ನು ಮೈಗೂಡಿಸಿಕೊಳ್ಳೋಣ,
ಈ ದೇಶದ, ಈ ಜಗತ್ತಿನ ಒಳಿತಿಗಾಗಿ ಶ್ರಮಿಸೋಣ, |
......................................................................ಬಸು |
No comments:
Post a Comment